ನಾವು ನಾಲ್ಕನೇ ಬಾರಿಗೆ ಕನ್ನಡ ಅಂಕಿಗಳು ಮತ್ತು ಕನ್ನಡದ ಹಲವು ಹಿರಿಯರ ಬಗ್ಗೆ ತಿಳಿವುಗಳನ್ನೊಳಗೊಂಡ ಒಂದು ಗೋಡೆ ನಾಳುತೋರುಗೆಯನ್ನು ಅಚ್ಚಿಸಿದ್ದೇವೆ. ಇದಕ್ಕೆ ಆರ್ಟ್ ಪೇಪರ್ (೧೩೦ gsm) ಬಳಸಲಾಗಿದೆ ಇದು ದೊಡ್ಡದಾಗಿ (೧೬" x ೧೨") ಇದೆ. ಇದರ ಬೆಲೆ ರೂ. ೧೨೫/- (ಅಂಚೆ ವೆಚ್ಚ ರೂ ೫೦ / ಒಂದೊಂದು ೧೦ರ ಕಟ್ಟಿಗೆ ). ನೀವು ಒಂದು ಬಿಡಿಯನ್ನು ಬೇಕಿದ್ದರೂ ಕೊಳ್ಳಬಹುದು. ಈ ಒಂದು ಕನ್ನಡ ಸೊಗಡಿನ ನಾಳುತೋರುಗೆಯನ್ನು ನೀವು ಕೊಳ್ಳಲು ಬಯಸುವಿರಾದಲ್ಲಿ ಈ ಕೆಳಗಿನ ಕುರಿಪುಗಳನ್ನ ತುಂಬಿ ಹಣವನ್ನು ಕಟ್ಟಿರಿ. ಅಂಚೆಯ ಮೂಲಕ ನಿಮ್ಮ ಬಿಡಿಗಳನ್ನು ಕಳಿಸುತ್ತೇವೆ.
ನೀವು ೧೦ಕ್ಕಿಂತ ಹೆಚ್ಚು ಕೊಂಡಲ್ಲಿ ಒಂದೊಂದು ೧೦ರ ಕಟ್ಟಿನೊಂದಿಗೆ ಮತ್ತೂ ೨ ನಾಳುತೋರುಗೆಗಳನ್ನು ಪುಕ್ಕಟೆಯಾಗಿ ಪಡೆಯುವಿರಿ. ( ಅಂದರೆ ನೀವು ೧೦೦ ಕೊಂಡಲ್ಲಿ ಇನ್ನೂ ೨೦ ಹೆಚ್ಚಿಗೆ ದೊರೆಯಲಿವೆ.)
ಒಮ್ಮೆ ಆರ್ಡರ್ ಮಾಡಿದ ಬಳಿಕ ರದ್ದುಗೊಳಿಸಲು ಆಗುವುದಿಲ್ಲ
೧೦ ರಿಂದ ೧೫ ನಾಳುಗಳು ಅಂದಾಜು ತಲುಪಿಸುವಿಕೆಯ ಹೊತ್ತಾಗಿದೆ
ಅಂಚೆಯಲ್ಲಿ ಆಗುವ ಯಾವುದೇ ತೊಂದರೆಗಳಿಗೆ ನಾವು ಹೊಣೆಗಾರರಲ್ಲ
ಅಂಚೆಯಲ್ಲಿ ಬಿಡಿಗಳು ನಸುಗಿ ಹೋಗುವ ತೊಂದರೆ ಇರುವುದರಿಂದ ನೀವು ಮೂರಕ್ಕಿಂತ ಹೆಚ್ಚು ಬಿಡಿಗಳನ್ನ ಕೊಳ್ಳುವುದನ್ನು ಹುರಿದುಂಬಿಸುತ್ತೇವೆ.